ದಿನಾಂಕ 3.1.2026 ರಂದು ಸಿರಾ ನಗರದ ರಂಗನಾಥ ಕಾಲೇಜು ಆವರಣದಲ್ಲಿನ ಕುಂಚಶ್ರೀ ಪ್ಯಾಲೇಸ್ ನಲ್ಲಿ ಮಾತೆ ಸಾವಿತ್ರಿ ಬಾಯಿ ಫುಲೆ ದಿನಾಚರಣೆ ನೆಡೆಯಿತು. ಕಾರ್ಯಕ್ರಮವನ್ನು ಸ್ಥಳೀಯ ಶಾಸಕರು, ದೆಹಲಿಯ ವಿಶೇಷ ಪ್ರತಿನಿಧಿ ಗಳಾದ ಶ್ರೀ ಟಿ ಬಿ ಜಯಚಂದ್ರರವರು ಉದ್ಘಾಟನೆ ಮಾಡಿದರು.


ಹೆಣ್ಣು ಮಕ್ಕಳು ಇಂದು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು, ಸಮಾಜದಲ್ಲಿನ ಮೌಢ್ಯತೆ ತೊಡೆದು ಹಾಕಬೇಕು. ಎಲ್ಲಾ ರಂಗದಲ್ಲಿ ಮೀಸಲಾತಿ ನೀಡಬೇಕು, ಸಮಾನ ಆದ್ಯತೆ ನೀಡಬೇಕು.ದೇಶದ ಪರಿವರ್ತನೆಯಲ್ಲಿ ಹೆಣ್ಣುಮಕ್ಕಳ ಪಾತ್ರ ಅತೀ ದೊಡ್ಡದು ಎಂದು ಮಹಿಳೆಯರ ಪಾತ್ರದ ಬಗ್ಗೆ ಅಪಾರ ಕಾಳಜಿ ತೋರಿದ್ದಾರೆ. ಅಲ್ಲದೇ ತಾಲೂಕಿನ ಸಾವಿತ್ರಿ ಬಾಯಿ ಫುಲೆ ಸಂಘದ ಬೇಡಿಕೆಗೆ ಸ್ಪಂದಿಸಿದ ಸರ್ಕಾರದ ವತಿಯಿಂದ ಒಂದು ಎಕರೆ ಜಮೀನು ಮಂಜೂರು ಮಾಡಿಕೊಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.


ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ರಾಧಮ್ಮ ನವರು ನಮ್ಮ ಸಂಘ ಕೇವಲ ಸಂಘ ಅಲ್ಲ ಅದು ಒಂದು ಶಕ್ತಿ. ಇಂದು ರಾಷ್ಟ್ರದಾದ್ಯಂತ ನಮ್ಮ ಸಂಘಟನೆ ವ್ಯಾಪಿಸಿದೆ. ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಮತ್ತು ನಮ್ಮೆಲ್ಲರ ಹೆಮ್ಮೆಯ ಧೀಮಂತ ನಾಯಕಿ ಡಾ.ಲತಾ ಎಸ್ ಮುಳ್ಳೂರ ರವರ ದಿಟ್ಟ ನಾಯಕತ್ವವೇ ಇದಕೆಲ್ಲ ಮೂಲ ಕಾರಣ ಎಂದು ತಿಳಿಸಿದರು.


ತರಗತಿಯಲ್ಲಿ ಇನ್ನೊವೇಟಿವ್ ಬೋಧನ ಕೌಶಲ್ಯದೊಂದಿಗೆ ಶಾಲಾ ಕರ್ತವ್ಯ ನಿರ್ವಹಿಸುತ್ತಿರುವ ಉತ್ತಮ ಶಿಕ್ಷಕಿಯರನ್ನು ತಾಲೂಕಿನ ತಲಾ 34 ಕ್ಲಸ್ಟರ್ ಗೆ ಒಬ್ಬರಂತೆ ಗುರುತಿಸಿ ಸನ್ಮಾನಿಸಲಾಯಿತು

ತಾ.ಅಧ್ಯಕ್ಷರಾದ ಶ್ರೀಮತಿ ಜಗದಾಂಬ ಮಾತನಾಡಿ ಮಾತೆ ಸಾವಿತ್ರಿ ಬಾಯಿ ಫುಲೆ ಯವರ ಜೀವನದ ಸಾಧನೆ ಕುರಿತು ಸ್ಮರಿಸಿ ಅವರ ಆದರ್ಶಗಳ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಸಮಾಜಮುಖಿ ಸೇವೆಗಳಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು ಎಂದಿದ್ದಾರೆ. ತಾ .ಕಾರ್ಯದರ್ಶಿ ಶ್ರೀಮತಿ ಅರ್ಪಣ ಎಲ್ಲರನ್ನು ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಕೃಷ್ಣಪ್ಪ ಕೆ. ಗೌರವಾಧ್ಯಕ್ಷರಾದ ಶ್ರೀಮತಿ ಮಂಜುಳ ಎಸ್. ಜಿ. ಗೌರವ ಸಲಹೆಗಾರರಾದ ಶ್ರೀಮತಿ ವೆಂಕಟಲಕ್ಷ್ಮಮ್ಮ,
ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರು ಶ್ರೀ ಹನುಮಂತರಾಜು ಬಿ ಆರ್. ರಾಜ್ಯ ಸರ್ಕಾರಿ ನೌಕರರ ಸಂಘದ ತಾ ಕಾರ್ಯದರ್ಶಿ ಶ್ರೀ ದೇವರಾಜು, ಶಿಕ್ಷಕರ ಸಂಘದ ಪದಾಧಿಕಾರಿ ಶ್ರೀ ಹನುಮಂತರಾಜು, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ನಾಗರಾಜು,ಮುಕುಂದಪ್ಪ, ರಂಗನಾಥ್, ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಮಧುಗಿರಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಲತಾಮಣಿ, ಸಿರಾ ತಾಲೂಕಿನ ಪದಾಧಿಕಾರಿಗಳಾದ ಚಂದ್ರಕಲಾ, ಶಬನಾ, ಪ್ರೇಮಲೀಲಾ, ಸುಜಾತ, ಸೌಭಾಗ್ಯ, ಮಮತ,ಕುಬ್ರಾ ಬಾನು, ಮುಂತಾದ ವರು ಪಾಲ್ಗೊಂಡರು ಶ್ರೀಮತಿ ಶೃತಿ ನಿರೂಪಿಸಿ ಕಾರ್ಯಕ್ರಮದ ಯಶಸ್ವಿಗೆ ಭಾಗವಸಿದ್ದ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿ ಸ್ಪಂದಿಸಿದ್ದ ಎಲ್ಲರಿಗೂ ವಂದಿಸಿದರು.




























